Monday, 10 September 2012

ಬಯಕೆ

ಮನವೆಂಬ
ತೋಟದಲ್ಲಿ
ಬಯಕೆಗಳೆಂಬ
ವಿಧ ವಿಧ
ಗಿಡಗಳು
ಒಂದಕ್ಕಿಂತ
ಒಂದು ಸೊಗಸು
ಸೊಗಸು
ಅನಾವರಣಗೊಳ್ಳಲು
ಶ್ರಮವೆಂಬ
ನೀರನ್ನ
ಶ್ರದ್ಧೆಯೆಂಬ
ಗೊಬ್ಬರವನ್ನ ಚೆಲ್ಲಿ
ಶ್ರಮ, ಶ್ರದ್ಧೆಗೆ
ತಕ್ಕಂತೆ
ಪ್ರತಿಫಲಗಳ
ಅನಾವರಣಗೊಳ್ಳುವುದಿಲ್ಲಿ...!!!

Thursday, 6 September 2012

ಊಟ

ಊಟದಲ್ಲಿಯು
ಹಲ ಬಗೆಯ
ಸ್ವಾಹಗಳುಂಟು
ಶ್ರೀಮಂತನಿಗೆ
ಮೃಷ್ಟಾನ್ನವಂತೆ
ಮಧ್ಯಮನಿಗೆ
ಇಷ್ಟಾನ್ನವಂತೆ
ಬಡವನಿಗೆ
ತಂಗಾಳ್ನವಂತೆ
ಭಕ್ತನಿಗೆ
ಪ್ರಸಾದವಂತೆ

ಬೇಕಿತ್ತು
ಸ್ವಾಹದಲ್ಲಿಯು
ಭಕ್ತಿಭಾವ
ಎಲ್ಲಡೆಯು
ಪಸರಿಸಬೇಕಿಹುದು
ಸ್ವಾಹವೆಂಬ ಭಾವವು
ಪ್ರಸಾದವೆಂಬ
ಭಾವವಾಗಿ
ವಿಜೃಂಭಿಸಬೇಕಿಹುದು...!!!

Wednesday, 5 September 2012

ನಗು

ನಕ್ಕು ನಲಿಯುವ
ಚಟವಿರಬೇಕು
ಮನದಲ್ಲಿ

ಅದು ಒಂದಿಷ್ಟು
ಅತ್ತಿತ್ತ ಸುಳಿಯದಂತೆ
ಹಿಡಿತವಿಡುವ
ಶಕ್ತಿ ತುಂಬಿರಬೇಕು

ದುಃಖವನ್ನು ಸಹ
ನಗುವಾಗಿ
ಪರಿವರ್ತಿಸುವ
ಪರಿಣಿತಿ
ಸಿದ್ಧಿಸಿರಬೇಕು

ಹುಚ್ಚನೆಂದರು
ಸರಿಯೇ
ತಿಕ್ಕಲನೆಂದರು
ಸರಿಯೇ
ನಗುವೇ ಜೀವನದ
ಗುರಿಯಾಗಿರಬೇಕು...!!!

Saturday, 1 September 2012

ಆತ್ಮೀಯತೆ

ಆತ್ಮೀಯತೆ
ಭಾವವು
ಬರ ಬರುತ್ತಾ
ನಂಬಿಕೆಯೆಂಬ
ಭಾವದೊಂದಿಗೆ
ಗಟ್ಟಿಯಾಗಿಹದು

ಆತ್ಮೀಯತೆ
ನಂಬಿಕೆಗಳೆರಡು
ಗಟ್ಟಿಯಾದಂತೆ
ಸಂಬಂಧಗಳ
ಭಾವವು
ಗಟ್ಟಿಯಾಗುವುದು

ಇವೆರಡರ
ಅವಿನಾಭಾವ
ಸಂಬಂಧಗಳೇ
ಬದುಕಿನ ಬಂಡಿ
ಸರಾಗವಾಗಿ
ಸಾಗುವುದಿಲ್ಲಿ..!!!