ನೋಡುತ್ತಾ ನೋಡುತ್ತಾ ಸಾಗಿದಂತೆ ಕಾಲ ಸರಿಯುವುದು ಅರಿವಾಗಲಿಲ್ಲ, ಕಳೆದ ಕಾಲದಲ್ಲಿ ಘಟಿಸಿದ ನೋವು -ನಲಿವಿನ ಚಿತ್ರಣ ಮಾತ್ರ ಮನದ ಮೂಲೆಯಲ್ಲಿ ಕಾಯ್ದಿರಿಸಿಕೊಂಡು ಸಾಗುತ್ತಿದೆ ಬದುಕು, ಬದುಕೇ ಹಾಗೆ ಹಳೆಯ ಮಧುರವಾದ ನೆನಪುಗಳೊಂದಿಗೆ ಹೊಸತನವನ್ನು ಹುಡುಕುತ್ತಾ ಸಾಗುತ್ತಿದೆ.
ಈ ಸಾಗುವಿಕೆಯಲ್ಲಿ ನಡೆದಾಡಿದ ರಸ್ತೆ, ಊರು, ಮನೆ, ಎಲ್ಲವೂ ನಮ್ಮ ಅನುಕೂಲತೆಗೆ ತಕ್ಕಂತೆ ಬದಲಾಯಿಸಿಕೊಂಡು ಸಾಗುತ್ತಿದ್ದೇವೆ, ಬದುಕಿಗೆ ಬದಲಾವಣೆ ಅನಿವಾರ್ಯವೇ ಅನ್ನಿಸುತ್ತದೆ, ಎಲ್ಲರೂ ಬದಲಾದ್ದಂತೆ ನಾವು ಬದಲಾಗಬೇಕು ಎನ್ನುವ ಧೋರಣೆ ಮನದ ಮೂಲೆಯಲ್ಲಿ ಎಚ್ಚರಿಸಿ ಬದಲಾದ ಪರಿಸ್ಥಿತಿಗನುಗುಣವಾಗಿ ಸಾಗುತ್ತಿದ್ದೇವೆ.
ಯಾವುದೋ ಒಂದು ಶಕ್ತಿ ನಮ್ಮನ್ನು ಕರೆದುಕೊಂಡು ಹೋಗುತ್ತಿರುವಂತೆ ಭಾಸವಾಗುತ್ತಿದೆ ನಮಗೆ, ನಾವು ನಮ್ಮ ಹಿತಕ್ಕಾಗಿ ಎಷ್ಟೋ ಅನಗತ್ಯವಾದ ಬದಲಾವಣೆ ಮಾಡಿಕೊಳ್ಳುವುದರ ಹಿಂದೆ ನಮ್ಮ ಸ್ವಾರ್ಥ ಅಡಗಿದೆ ಅನ್ನಿಸುತ್ತದೆ, ಯಾಕೆ ಹೀಗೆ ಎಂದರೆ ಉತ್ತರವಿಲ್ಲದ ನೋಟ, ಆಧುನಿಕತೆಯ ನವನವೀನಾ ಮಾದರಿಯ ಮನೆ, ಎಲೆಕ್ಟ್ರಾನ್ ಉತ್ಪನ್ನಗಳು, ತಂತ್ರಜ್ಞಾನದ ಪರಿಧಿಯಲ್ಲಿ ಬರುವ ಅವಶ್ಯಕತೆ ಇಲ್ಲದಿದ್ದರು ಇರುವಂತೆ ಬಿಂಬಿಸುತ್ತಿರುವ ಮೊಬೈಲ್, ಏನೆಲ್ಲ ಬಂದುಬಿಟ್ಟವು ಕಳೆದ 20 ವರ್ಷಗಳಲ್ಲಿ ಎಷ್ಟೊಂದು ಬದಲಾವಣೆ.
ಯಾವುದು ಇಲ್ಲದ ಅಂದಿಗೂ ಇಂದಿಗೂ ಹೊಲಿಕೆ ಅಜಗಜಾಂತರ. ಈ 20 ವರ್ಷಗಳಲ್ಲಿ ಇಷ್ಟೊಂದು ಬದಲಾವಣೆ ಆಗುತ್ತದೆ ಎಂದು ಅಂದು ಹೇಳಿದ್ದರೇ ಯಾರು ನಂಬುತ್ತಿರಲಿಲ್ಲವೇನೋ ಅಂದಿನವರು. ಎಷ್ಟೊಂದು ಬದಲಾವಣೆ ಇಂದು. ಅಂದು ಮನೆ ಮನೆಗೆ ವಿದ್ಯುತ್ ದೀಪಗಳು ಬಂದಾಗ ಜನರ ಮನದಲ್ಲಿ ಎಷ್ಟೊಂದು ಸಂಭ್ರಮ ನೆಲೆಸಿತ್ತೋ ಗೊತ್ತಿಲ್ಲ, ಅದೇ ರೀತಿ ತಂತ್ರಜ್ಞಾನ ಪರಿಧಿಯೊಳಗೆ ಬಂದ ಮಾಂತ್ರಿಕ ಎಂದು ಬಿಂಬಿತವಾದ ರೇಡಿಯೋದಿಂದ ಬರುವ ಧ್ವನಿಯನ್ನು ಕೇಳಿ ಜನರ ಮನಸ್ಸಿನಲ್ಲಿ ಇಂದೊಂದು ಮಾಂತ್ರಿಕ ಪೆಟ್ಟಿಗೆ ಅನ್ನಿಸಿಬಿಟ್ಟಿತ್ತು, ಅದನ್ನು ಹೊಂದಿದವರೇ ಶ್ರೀಮಂತರು ಎನ್ನುವ ಭಾವ, ಜೊತೆಗೆ ಅದರಿಂದ ಬರುವ ಸಂಗೀತ, ನಾಟಕಗಳು, ವಾರ್ತೆಗಳ ಸವಿಯನ್ನು ರೇಡಿಯೋ ಹೊಂದಿದವರ ಮನೆ ಜಗಲಿಯಲ್ಲಿ ಜನಜಂಗಲಿಯೇ ಕಾಣಬಹುದಾಗಿತ್ತು.
ಇನ್ನೂ ನಾಟಕಗಳೇ ಪ್ರಧಾನವಾಗಿದ್ದ ಕಾಲವದ್ದು, ನಾಟಕದಲ್ಲಿ ಅಭಿನಯಿಸಿದ ಕಲಾವಿದರು ಕಣ್ಣಲ್ಲಿ, ಮನದಲ್ಲಿ ತುಂಬಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಕಾಲವದು. ಕಾಲದ ಪರಿಧಿಯಲ್ಲಿ ರೈತಾಪಿ ಜನರಿಗೆ ತಮ್ಮ ದೈಹಿಕ ದಣಿವಾರಿಸಿಕೊಳ್ಳಲು, ಮನಸ್ಸನ್ನು ಉಲ್ಲಾಸವಾಗಿರಿಸಲು ಅಂದು ನಾಟಕವೇ ಪ್ರಧಾನವಾಗಿತ್ತು. ನಾಟಕಗಳಲ್ಲಿ ರಾಮಾಯಣ, ಮಹಾಭಾರತದ ಕೆಲವೊಂದು ಭಾಗಗಳ ಆಯ್ಕೆ ಮಾಡಿಕೊಂಡು ನಾಟಕ ಮಾಡುತ್ತಿದ್ದ ಕಾಲವದ್ದು, ಅಂತಹ ಕಾಲದಲ್ಲಿ ನಾಟಕದಲ್ಲಿ ಬರುವ ಪಾತ್ರಧಾರಿಗಳೇ ಮೇಲುಗೈ ಸಾಧಿಸುತ್ತಿದ್ದರು. ರಾಮಾಯಣ, ಮಹಾಭಾರತದಲ್ಲಿ ಬರುವ ಪಾತ್ರಧಾರಿಗಳಾದ ಶ್ರೀಕೃಷ್ಣ, ಶ್ರೀರಾಮಚಂದ್ರ, ಯುದಿಷ್ಠರ, ಕರ್ಣನ ಪಾತ್ರಗಳು ಹಾಗೂ ಅವರಲ್ಲಿರುವ ಒಳ್ಳೆಯ ನಡವಳಿಕೆಗಳನ್ನೇ ಮೈದುಂಬಿಸಿಕೊಳ್ಳುವುದೇ ಹೆಚ್ಚು. ನ್ಯಾಯಪರವಾದ ಪಾತ್ರಗಳನ್ನು ನೋಡಿ ನೋಡಿ, ಅದನ್ನು ತಮ್ಮಲ್ಲಿಯು ಅಳವಡಿಸಿಕೊಳ್ಳುತ್ತಿದ್ದರು.
ಸಹಕಾರದ ವಿಷಯದಲ್ಲಿ ಮಾತ್ರ ಹಸಿವು ಎಂದು ಬಂದಾಗ ಕಷ್ಟ-ಸುಖಗಳಲ್ಲಿ ಭಾಗಿಯಾಗುವುದು, ಅವನಿಗೆ ಬದುಕುವ ಸ್ಥೈರ್ಯವನ್ನು ತುಂಬ ಕೆಲಸ, ಬದುಕುವ ರೀತಿ ನೀತಿಗಳ ಪಾಠ ಹಿರಿಯರಿಂದ ಆಗುತ್ತಿತ್ತು, ಜೊತೆಗೆ ಆತನಿಗೆ ಮಾನಸಿಕವಾಗಿ ಸ್ಥೈರ್ಯ ತುಂಬುವಂತಹ ಕೆಲಸ ಕೂಡ ನಡೆಯುತ್ತಿದ್ದವು, ನ್ಯಾಯದ ಕಟ್ಟೆಯಲ್ಲಿ ಯಾರೊಬ್ಬರಿಗೂ ನೋವಾಗದಂತೆ ನ್ಯಾಯಪರವಾದ ತೀರ್ಪುಗಳನ್ನು ಕಾಯ್ದಿರಿಸಿಕೊಳ್ಳುತ್ತಿದ್ದರು.
ತನ್ನ ಊರು-ಕೇರಿಯ ಬಗೆಗಿನ ಅಭಿಮಾನ, ಅವುಗಳೊಡಗಿನ ಒಡನಾಟ ಹೆಚ್ಚು ಪ್ರೀಯವಾಗಿತ್ತು, ತನ್ನ ಹೊಲ, ತೋಟ, ತಾನು ಬೆಳೆದ ತೆಂಗು, ಮಾವು, ಧವಸಧಾನ್ಯಗಳ ಬಗೆಗಿನ ಕಾಳಜಿ, ತಾನು ಸಾಕಿದ ರಾಸುಗಳ ಬಗೆಗಿನ ಕಾಳಜಿಯುಕ್ತ ನೋಟ ಎಲ್ಲವೂ ಒಂದು ಶಿಸ್ತುಬದ್ಧವಾದ ಜೀವನಕ್ಕೆ ದಾರಿಯಂತೆ ಸಾಗುತ್ತಿದ್ದವು.
ಅಂದು ಅಂತಹ ವಾತಾವರಣವಿತ್ತು ಎಂದು ಇಂದಿನವರಿಗೆ ಹಿರಿಯರು ಹೇಳಿದ್ದರೇ ಹೌದಾ!!! ಎಂದು ಆಶ್ಚರ್ಯ ವ್ಯಕ್ತಪಡಿಸುವಷ್ಟರ ಮಟ್ಟಿಗೆ ಆಧುನಿಕತೆ ಬೆಳೆದು ನಿಂತಿದೆ. ಅದನ್ನು ನಂಬುವ ಮನಸ್ಸು ಇಲ್ಲವಾಗಿದೆ, ಅದು ಒಂದು ಕಲ್ಪನೆ ಎನ್ನುವಷ್ಟರಮಟ್ಟಿಗೆ ಬದಲಾಗಿದೆ. ಇಷ್ಟೊಂದು ಬದಲಾವಣೆ ಕೇವಲ 25-35 ವರ್ಷಗಳೊಳಗೆ, ಇಷ್ಟೆಲ್ಲ ಆಧುನಿಕತೆಯನ್ನು ಒಪ್ಪಿಕೊಳ್ಳುವುದರ ಜೊತೆ ಜೊತೆಯಲ್ಲಿ ನಮ್ಮಲ್ಲಿಯು ಮಾನವೀಯತೆಯ ಗುಣಗಳು ಹೆಚ್ಚು ಹೆಚ್ಚು ಬೆಳೆಯಬೇಕಾಗಿತ್ತು, ಆದರೆ ಮಾನವೀಯತೆ ಕ್ಷೀಣಿಸಿ, ಅಂತಹ ಗುಣಗಳನ್ನು ಹುಡುಕುವಷ್ಟರ ಮಟ್ಟಿಗೆ ಹಾಳಾಗಿಬಿಟ್ಟಿದೆ. ಆಧುನಿಕತೆ ಯುಗ ಮಾತ್ರ ಭರದಿಂದ ಬೆಳೆಯುತ್ತಾ ಸಾಗುತ್ತಿದೆ ಎಷ್ಟೊಂದು ಬದಲಾವಣೆಗಳು... ಜೀವನವೆಂಬ ನಾಟಕರಂಗದಲ್ಲಿ ಏನೆಲ್ಲ ಏರು-ಪೇರುಗಳು ಅಲ್ಲವೇ?

No comments:
Post a Comment