Wednesday, 3 October 2012

ಬದುಕು

ಬದುಕು ಒಂದು ಪುಸ್ತಕವಿದ್ದಂತೆ
ಒಂದೊಂದು ದಿನ
ಒಂದೊಂದು ಪುಟವಿದ್ದಂತೆ
ಒಂದೊಂದು ಪುಸ್ತಕವು
ಒಂದೊಂದು ವರ್ಷವಿದ್ದಂತೆ
ಬದುಕಿದ ಹಲ ವರ್ಷಗಳು
ಹಲ ಪುಸ್ತಕಗಳ ಭಂಡಾರವಿದ್ದಂತೆ
ಕೆಲವೊಂದು ಪುಟ
ಮನಸ್ಸಿಗೆ ಇಷ್ಟವಾಗಬಹುದು
ಕೆಲವೊಂದು ಪುಟ
ಮನಸ್ಸಿಗೆ ಇಷ್ಟವಾಗದಿರಬಹುದು
ಕೆಲವೊಂದು ಪುಸ್ತಕ
ಬದುಕಿನ ದಿಕ್ಕನೇ ಬದಲಿಸಬಹುದು
ಕೆಲವೊಂದು ಪುಸ್ತಕ
ನಿರಾಯಾಸವಾದ ಬದುಕಾಗಿರಬಹುದು
ಬದುಕೇ ಹಾಗೆ
ಎಲ್ಲವೂ ಒಳ್ಳೆಯ
ಪುಸ್ತಕಗಳಾಗಿರುವುದಿಲ್ಲ
ಬದುಕಿದ ಒಳ್ಳೆಯ
ಪುಸ್ತಕದ ನೆನಪಿನೊಂದಿಗೆ
ಸಾಗುತ್ತಾ ಅದನ್ನ
ಹೆಕ್ಕುತ್ತಾ ಸಾಗುತ್ತದೆ
ಬದುಕು....!!!

No comments:

Post a Comment