Sunday, 21 October 2012

ಹುಡುಕುವಿಕೆ

ಹುಡುಕುತಿಹರು
ಹೊಸತನವನ್ನ
ಪ್ರೀತಿ, ಪ್ರೇಮ
ನಾನು ನನ್ನವರು
ಪರಿಧಿಗೂ ಮೀರಿದ
ಬದುಕು ಇದೆಯೇ
ಎಂದೂ...!!
ಆದರೆ, ಅರಿವು
ಸೀಮಿತದಲ್ಲಿದೆಯೋ
ಸಿಮಿತವೇ
ಬದುಕಾಗಿದೆಯೋ
ಜಿಜ್ಞಾಸೆಯಲ್ಲಿಹುದು
ಹುಡುಕುವವರು
ಹುಡುಕುತ್ತಿರುವವರು
ಹುಡುಕದೇ ಅದೇ
ಪರಿಧಿಯಲ್ಲಿ
ಸುತ್ತುತ್ತಿರುವವರು
ಗೊಂದಲದ ಬದುಕಿನ
ಗೋಜಿಗೆ ಅಂಟಿಕೊಂಡವರು
ಮಾಯೆಯೆಂಬ
ಮನದ ಜೊತೆ
ಓಡುತ್ತಿಹರು...!!!

No comments:

Post a Comment