Tuesday, 9 October 2012

ಮೋಹ

ಅರಿವಿಲ್ಲದೆ
ಮೋಸಹೋಗುವ
ಮನಸ್ಸು
ಅರಿವಿದ್ದರೂ
ಮೋಸಹೋಗುವ
ಮನಸ್ಸು
ಯಾಕೋ, ಏನೋ
ಒಂದು ಗೊತ್ತಿಲ್ಲ
ಅರಿವಿದ್ದರೇ
ಮೋಸ
ಹೋಗುವುದಿಲ್ಲವೆಂದು
ಹೇಳುವ
ಮಂದಿಯು ಕೂಡ
ಮೋಸ
ಹೋಗುವುದುಂಟು
ಇಲ್ಲಿ ಅರಿವಿನ
ಸಮಸ್ಯೆಯಲ್ಲ
ಮೋಹವೆಂಬ
ಮಾಯೆ
ಆವರಿಸಿದಾಗ
ಮೋಸ
ಹೋಗುವುದುಂಟು...!!!

No comments:

Post a Comment