Monday, 17 December 2012

ಪ್ರಕೃತಿ

ಮೈಹಾಸಿ
ತಣ್ಣನೆಯ
ಸ್ವಚ್ಛತೆಯ
ಸವಿಗಾಳಿ
ಸವಿಯುತ್ತಾ
ಮನಸ್ಸಿನ
ಕಲ್ಮಶಗಳನ್ನೆಲ್ಲ
ಬದಿಗೊತ್ತಿ
ಹಸಿರಹೊನ್ನಸಿರಿಯ
ಮಧ್ಯೆ
ಬದುಕಿನ
ಏರಿಳಿತಗಳೆಂಬಂತೆ
ಹರಿಯುತ್ತಿರುವ
ಜಲಧಾರೆ
ನೀ ಹೊಮ್ಮಿಸುವ
ತರಂಗಗಳು
ಮನಸ್ಸಿನ
ನವಚೈತನ್ಯದತ್ತ
ಬದುಕಿನ
ಆದರ್ಶಗಳನ್ನ
ಮೆಲುಕುಹಾಕಲು
ನಿಮ್ಮ ಒಡನಾಟವೇ
ಬಲು ಆನಂದ
ನಿಮ್ಮ ವನಸಿರಿಗೆ
ಕೊಳ್ಳಿ ಇಡಲು
ಮುಂದಾಗುವ
ಮನುಕುಲಕ್ಕೆ
ನನ್ನ ಧಿಕ್ಕಾರವಿರಲಿ...!!!

No comments:

Post a Comment