Thursday, 6 December 2012

ವರುಣ

ಅದೇಕೋ ಇಂದು
ರಾತ್ರಿಯೆಲ್ಲ
ಮೇಘದೂತನ
ಆರ್ಭಟವೇ ಆರ್ಭಟ
ಭುವಿಗೆ ಒಂದಷ್ಟು
ತಂಪನ್ನೆರೆಯುವ
ವರುಣ ಮಾತ್ರ
ಧರೆಗಿಳಿಯಲೇ ಇಲ್ಲ...!!
ರಚ್ಚೆ ಹಿಡಿದ
ಮಗುವಿನಂತೆ,
ಮುನಿಸಿಕೊಂಡ
ಮಡದಿಯಂತೆ,
ಮೇಘದೂತನ
ಸದ್ದು-ಗದ್ದಲದಲ್ಲಿ
ಕದನಕ್ಕಿಳಿದು
ಭುವಿಯೊಂದಿಗಿನ
ಮಿಲನಕ್ಕೆ
ಸ್ಪಂದಿಸಲೇ ಇಲ್ಲ...!!!

No comments:

Post a Comment