Monday, 26 November 2012

ಅಹಂ

ಬದುಕೇ ಮಾಯೆಯೋ
ಮಾಯೆಯೇ ಬದುಕೋ
ಮಾನವ ನೋಡಲು ಒಂದೇ
ಬಗೆಯಾದರೂ
ಅಭಿರುಚಿಯಲ್ಲಿ ಭಿನ್ನ
ನಡೆತೆಯಲ್ಲಿ ಭಿನ್ನ
ಹೊಂದಾಣಿಕೆಯಲ್ಲಿಯೂ
ಭಿನ್ನವಾಗಿಹುದು...!!!

ಒಮ್ಮತವಿಲ್ಲದೆ ಎಷ್ಟೋ
ಒಳ್ಳೆಯ ನಿರ್ಣಯಗಳು
ಕಾಲಗರ್ಭದಲ್ಲಿ ಲೀನವಾಗಿಹುದಿಲ್ಲಿ
ಸರಿಕಂಡದ್ದನ್ನ ಒಪ್ಪುವ ಮನವಿಲ್ಲದೆ
ವ್ಯಕ್ತಿತ್ವವೆಂಬ ಪ್ರತಿಷ್ಠೆಯ ಕೂಸು
ಬಡವಾಗುವುದೆಂಬ
ಭಯ ಕಾಡುವುದು ಮನದಲ್ಲಿ...!!!

ಕಾಡಿದರೇ ಕಾಡಲಿ
ಒಪ್ಪಬಾರದೆ ಸರಿ ಕಂಡದ್ದನ್ನ
ನಾ, ನೀ, ಎಂಬ ಭಾವ
ಸೃಷ್ಟಿಯಲ್ಲಿ ಲೀನವಾಗುವ ಮುನ್ನ
ಬಿಡಬಾರದೆ 'ಅಹಂ'
ಎಂಬ ಭಾವವಾ?!

No comments:

Post a Comment