ಹುಟ್ಟಿನೊಂದಿಗೆ
ಗಂಟು ಕಟ್ಟಿಕೊಂಡಿಹುದು
ನಂಟು
ಹುಟ್ಟಿದಾಕ್ಷಣ
ಸಂಗಾತಿಯಂತೆ
ಬೆನ್ನಹಿಂದೆ
ಬೇಡವೆಂದರೂ
ಬೆಂಬತಿಹುದು
ಅದರರಿವಿದ್ದರೂ
ನಿರೀಕ್ಷೆಗಳ
ಸಾಗರದೊಳಗೆ
ತೇಲುವ
ಅದರೊಳಗೆ
ಕೊಚ್ಚಿಹೋಗುವ
ಬಯಕೆಗಳು
ಒಂದೇ ಎರಡೇ
ಲೆಕ್ಕವಿಲ್ಲದಷ್ಟು
ಕಟ್ಟಿಕೊಂಡ
ಬಯಕೆಗಳ
ಬೆನ್ನಹಿಂದೆಯೇ
ಸಾವು
ನೋಡಿ ನಗುತಿಹುದು!!!
ಗಂಟು ಕಟ್ಟಿಕೊಂಡಿಹುದು
ನಂಟು
ಹುಟ್ಟಿದಾಕ್ಷಣ
ಸಂಗಾತಿಯಂತೆ
ಬೆನ್ನಹಿಂದೆ
ಬೇಡವೆಂದರೂ
ಬೆಂಬತಿಹುದು
ಅದರರಿವಿದ್ದರೂ
ನಿರೀಕ್ಷೆಗಳ
ಸಾಗರದೊಳಗೆ
ತೇಲುವ
ಅದರೊಳಗೆ
ಕೊಚ್ಚಿಹೋಗುವ
ಬಯಕೆಗಳು
ಒಂದೇ ಎರಡೇ
ಲೆಕ್ಕವಿಲ್ಲದಷ್ಟು
ಕಟ್ಟಿಕೊಂಡ
ಬಯಕೆಗಳ
ಬೆನ್ನಹಿಂದೆಯೇ
ಸಾವು
ನೋಡಿ ನಗುತಿಹುದು!!!
No comments:
Post a Comment