Saturday, 10 November 2012

ದಾಹ

ನೀಡುವವನ
ಆಳದರಿವಿದ್ದರೇ
ನೀಡುವವನನ್ನೇ
ಬರಿದು ಮಾಡಿ
ಬಿಡುವ ಉತ್ಸಾಹ
ತುಂಬಿಹುದು
ಮನದಲ್ಲಿ
ಭರಿಸಲಾಗದಷ್ಟು,
ತೃಪ್ತಿ ಹೊಂದಲಾರದಷ್ಟು
ಕನಸುಗಳ
ಸಾಲು ಸಾಲು
ಒಂದೇ ಎರಡೇ
ತೃಪ್ತಿ ಇಲ್ಲದ
ಭಾವದೊಂದಿಗಿನ
ಒಡನಾಟ
ಏಕೋ, ಏನೋ
ಒಂದು ಗೊತ್ತಿಲ್ಲ
ಬೇಡ ಎನ್ನುವುದಕ್ಕಿಂತ
ಬೇಕು ಎನ್ನುವುದೇ
ಎದ್ದು ಬಂದು
ನಿಲ್ಲವುದು
ಮನದಿಂದ...!!!

No comments:

Post a Comment